STUDENTS INAUGURATING THEIR WORLD OF INQUISITIVENESS, EXPLORATION AND THE JOYS OF LEARNING !! 29/05/2024
Awareness Campaign on 'ANTI TOBACCO DAY'
30/05/2024
The harmful effect of nicotine was addressed by the students of std VIII
03/06/2024
THE NEW H.M. MRS. SHILPA PONNAMMA TAKING FORWARD THE 25 YEAR LEGECY FROM MRS. SHEELA ABDULLA ! HOLISTIC DEVELOPMENT WITH CONSISTANT ACADEMIC EXCELLENCE, AFFORDABLE FOR ALL SECTIONS OF THE SOCIETY.'
12/06/2024
ANTI CHILD LABOUR DAY
Oath taken by students on Anti Child Labour Day.
They pledged to help children employed in different work place to enroll in school. They also pledged to denounce any products made involving young children.
26/06/2024
International Day against Drug Abuse and Illicit trafficking
A.S.I. Mr. P.T. Srinivasa and Constable Mr. Manjunath from Murnad outpost created awareness for the high school students about substance abuse. They emphasised on the role of every person to join hands to create a Drug Free Society.
AWARNESS ON CHILD ABUSE / CHILD RIGHTS/CHILD SAFETY
14/01/2025
SILVER JUBILEE CELEBRATION
ಜ್ಞಾನಜ್ಯೋತಿ ವಿದ್ಯಾಸಂಸ್ಥೆ ಕೋಡಂಬೂರು ಮೂರ್ನಾಡು ಶಾಲೆಯಲ್ಲಿ ದಿನಾಂಕ 21.06.2025 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ನಾಲ್ಕನೇ ತರಗತಿಯ ಋತ್ವಿಕಾ ಪೊನ್ನಮ್ಮ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಮುಖ್ಯ ಶಿಕ್ಷಕರಾದ ಶ್ರೀಮತಿ ಶಿಲ್ಪಾ ಪೊನ್ನಮ್ಮನವರು ಯೋಗದ ಮಹತ್ವವನ್ನು ವಿವರಿಸಿದರು ಸಹ ಶಿಕ್ಷಕರಾದ ಶ್ರೀಮತಿ ಜಲಜಾಕ್ಷಿ ಮತ್ತು ಸ್ವರ್ಣ ಲತಾ ರವರು ತಮ್ಮ ಭಾಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು ಯೋಗ ಶಿಕ್ಷಕಿ ಶ್ರೀಮತಿ ಶೋಭಾ ಎ ಎಸ್ ರವರಿಂದ ಯೋಗಾಸನ ಮತ್ತು ಯೋಗ ನೃತ್ಯವನ್ನು ವಿದ್ಯಾರ್ಥಿಗಳಿಂದ ಮಾಡಿಸಲಾಯಿತು ನಂತರ ಆರರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಆಸನಗಳ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಶ್ರೀಮತಿ ಯಾಮಿನಿ ರವರು ನೆರವೇರಿಸಿದರು
ಮೂರ್ನಾಡುವಿನ ಜ್ಞಾನ ಜ್ಯೋತಿ ವಿದ್ಯಾ ಸಂಸ್ಥೆ ಯಲ್ಲಿ ದಿನಾಂಕ 11/7/2025 ರಂದು, ಕೊಡಗು ಜಿಲ್ಲಾ ಪೋಲಿಸ್ ರವರ ಸಂಯುಕ್ತ ಆಶ್ರಯ ದಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ ಮತ್ತು ಮಾದಕ ವಸ್ತು ವ್ಯಸನ ಮುಕ್ತ ಹಾಗೂ ಅನಧಿಕೃತ ಮಕ್ಕಳ ಸಾಗಾಟ ವಿರೋಧಿ ಜಾಗೃತಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು . ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯ ಸರ್ಕಲ್ ಇನ್ಸ್ಪೆಕ್ಟರ್ ಶ್ರಿ ಚಂದ್ರಶೇಖರ್ ರವರು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಮಾರ್ಗದರ್ಶನ ನೀಡಿದರು. 18ನೇ ವರ್ಷ ದೊಳಗಿನ ವಿದ್ಯಾರ್ಥಿಗಳು ಲೈಸನ್ಸ್ ಇಲ್ಲದೆ ವಾಹನ ಚಲಾಯಿಸುವುದು ಅಕ್ಷಮ್ಯ ಅಪರಾಧ ಹಾಗೂ ಅದರ ಪರಿಣಾಮ ವನ್ನು ತಿಳಿಸಿದರು. ಮಾದಕ ವಸ್ತುಗಳ ಸೇವನೆ ಯಿಂದ ಉಂಟಾಗುವ ದುಷ್ಪರಿಣಾಮ ವನ್ನು ಅಚ್ಚುಕಟ್ಟಾಗಿ ವಿವರಿಸಿದರು. ಶಾಲಾ ವಾಹನ ಚಾಲಕ ರಿಗೂ ಸಹ ವಾಹನ ಚಾಲನೆ, ನಿರ್ವಹಣೆ , ಹಾಗೂ ಸುರಕ್ಷತೆ ಯ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ವರ್ಗದವರು, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಮುಖ್ಯೋಪಾಧ್ಯಾಯಿನಿ, ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಜ್ಞಾನ ಜ್ಯೋತಿ ವಿದ್ಯಾ ಸಂಸ್ಥೆ ಮೂರ್ನಾಡುವಿನಲ್ಲಿ 2025-26ನೇ ಸಾಲಿನ ವಿದ್ಯಾರ್ಥಿಗಳ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭವು ದಿನಾಂಕ 16/7/2025 ನೇ ಬುಧವಾರದಂದು ಜ್ಞಾನ ಜ್ಯೋತಿ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮ ದ ಮುಖ್ಯ ಅತಿಥಿ ಯಾಗಿ ಪತ್ರಿಕೋದ್ಯಮಿ ಕರಿಕೆ ಗ್ರಾಮದ ಶ್ರೀ ರಮಾನಾಥ್ ರವರು ಪಾಲ್ಗೊಂಡಿದ್ದರು ಹಾಗೂ ಶಾಲೆಯ ಅಧ್ಯಕ್ಷ ರು, ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶ್ರೀಮತಿ ಶಿಲ್ಪಾ ಪೊನ್ನಮ್ಮ ನವರು ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದ ನಿರೂಪಣೆ, ಸ್ವಾಗತ ಹಾಗೂ ವಂದನಾರ್ಪಣೆಯನ್ನು ವಿದ್ಯಾರ್ಥಿಗಳು ನೆರವೇರಿಸಿದರು. ಮುಖ್ಯ ಅತಿಥಿ ವಿದ್ಯಾರ್ಥಿಗಳಿಗೆ ಸಮಯದ ಮಹತ್ವ ಹಾಗೂ ಸಂತೋಷದ ಜೀವನವನ್ನು ಹೇಗೆ ರೂಪಿಸಿಕೊಳ್ಳಬಹುದು ಮತ್ತು ಯಾವುದೇ ಕೆಲಸವನ್ನಾದರೂ ಶ್ರದ್ಧೆ ಭಕ್ತಿ ಯಿಂದ ಮಾಡಬೇಕೆಂದು ತಿಳಿಸಿದರು ಈ ಕಾರ್ಯಕ್ರಮ ವನ್ನು ಶಾಲಾ ಶಿಕ್ಷಕಿಯರಾದ ಶ್ರೀಮತಿ ಶೋಭಾ ಪಿ ಕೆ ಹಾಗೂ ಶ್ರೀಮತಿ ಶಾಲಿನಿ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಮೂರ್ನಾಡುವಿನ ಜ್ಞಾನ ಜ್ಯೋತಿ ವಿದ್ಯಾ ಸಂಸ್ಥೆಯಲ್ಲಿ ದಿನಾಂಕ 16/7/2025 ರಂದು ಸ್ಕೌಟ್ ಮತ್ತು ಗೈಡ್ ಸೇವಾ ಸಂಸ್ಥೆಯ ವತಿಯಿಂದ ದೀಕ್ಷಾ ಸಮಾರಂಭ ನಡೆಯಿತು.ಈ ಸಮಾರಂಭದಲ್ಲಿ ಜಿಲ್ಲಾ ಸ್ಕೌಟ್ ಕಮಿಷನರ್ ಆಗಿರುವಂತಹ ಶ್ರೀ ಜಿಮ್ಮಿ ಸಿಕ್ವೆರ ಇವರು ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ದೀಕ್ಷೆಯನ್ನು ಮಾಡಿಸಿದರು. ಮತ್ತು ಗೈಡ್ ಕಮಿಷನರ್ (ಎ.ಡಿ .ಸಿ) ಆಗಿರುವಂತಹ ಶ್ರೀಮತಿ ಸುಲೋಚನಾ ರವರು ಹಾಗೂ ಜಿಲ್ಲಾ ಸ್ಕೌಟ್ ಮತ್ತು ಗೈಡ್ ನ ಸಂಘಟಕರಾಗಿ ಯು.ಸಿ ದಮಯಂತಿ ಮತ್ತು ಹಿಮಾಲಯನ್ ಉಡ್ ಬ್ಯಾಡ್ಜ್ ಹೋಲ್ಡರ್ ಶ್ರೀ ಗುಲ್ಶನ್ ಇವರು ಈ ಕಾಯ೯ಕ್ರಮದಲ್ಲಿ ಭಾಗಿಯಾಗಿದ್ದರು. ಮತ್ತು ಶಾಲಾ ಆಡಳಿತ ಮಂಡಳಿಯ ಸದಸ್ಯರು, ಮುಖ್ಯೋಪಾಧ್ಯಾಯಿನಿ, ಸ್ಕೌಟ್ ಮತ್ತು ಗೈಡ್ ನ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಹಾಗೂ ಶಿಕ್ಷಕೇತರ ವಗ೯ದವರು ಪಾಲ್ಗೊಂಡಿದ್ದರು
ಜ್ಞಾನಜ್ಯೋತಿ ವಿದ್ಯಾಸಂಸ್ಥೆ ಮೂರ್ನಾಡು ಶಾಲೆಯಲ್ಲಿ ದಿನಾಂಕ 15/೦8 /2025 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣ ವನ್ನು ಸಂಸ್ಥೆ ಯ ಅಧ್ಯಕ್ಷ ರಾದ ಶ್ರೀ ರವಿ ಚಿಯಣ್ಣ ನವರು ನೆರವೇರಿಸಿದರು. ಶಾಲೆಯ ಸ್ಕೌಟ್ಸ್ ಗೈಡ್ಸ್ ತಂಡ ದಿಂದ ಪಥ ಸಂಚಲನೆ ಹಾಗೂ ಧ್ವಜ ವಂದನೆ ಸಲ್ಲಿಸಲಾಯಿತು. ಯು ಕೆಜಿ ತರಗತಿಯ ಕುಮಾರಿ ದಿಶಾನಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಸಮಾರಂಭದ ಅಥಿತಿಯವರಾಗಿ ಶ್ರೀಮತಿ ಶಾಲಿನಿ ಹಿಂದಿ ಶಿಕ್ಷಕರು, ಹಾಗೂ ಉಪಾಧ್ಯಕ್ಷರು ಶ್ರೀ ಬೆಲ್ಲು ಚಿಣ್ಣಪ್ಪ ನವರು, ಮುಖ್ಯ ಶಿಕ್ಷಕರಾದ ಶ್ರೀಮತಿ ಶಿಲ್ಪಾ ಪೊನ್ನಮ್ಮನವರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ಅಧ್ಯಕ್ಷರು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಅವರು ದೇಶದ ಉತ್ತಮ ಪ್ರಜೆಯಾಗಿ ದೇಶದ ಅಭಿವೃದ್ಧಿಗೆ ಪರಿಶ್ರಮಿಸುವಂತೆ ಕಿವಿ ಮಾತು ಹೇಳಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿಯಾದ ಕುಮಾರಿ ನಮೃತ ಬಿ. ಎಂ.ರವರು ನೆರವೇರಿಸಿದರು
POSCO ACT AWARENESS PROGRAMME
ದಿನಾಂಕ 16/08/2025 ರಂದು ಜ್ಞಾನಜ್ಯೋತಿ ಶಾಲೆ ಮೂರ್ನಾಡು, ಕೊಡಗು
ಈ ಶಾಲೆಯಲ್ಲಿ ಶ್ರೀಮತಿ ಸುಮತಿ ಹೆಡ್ ಕಾನ್ಸಟೇಬಲ್ ಹಾಗೂ ಸತ್ಯ ಎಸ್. ಜೆ. ಎಸ್. ಜೆ. ಪಿ.ಯು.
ಇವರಿಂದ ಪೊಸ್ಕೊ ಆಕ್ಟ , ಜೆ.ಜೆ ಆಕ್ಟ ಬಗ್ಗೆ ಶಿಕ್ಷಕರು ಹಾಗು ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು. ಬಾಲ್ಯ ವಿವಾಹ, ಸೈಬರ್ ಕ್ರೈಂ , ಮಾದಕ ವಸ್ತುಗಳ
ಸೇವನೆ ಬಗ್ಗೆ ಕಾನೂನು ಅರಿವು ಕಾರ್ಯಕ್ರಮವನ್ನು ನಡೆಸಿದ್ದು, ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ
ಪಾಲ್ಗೋಂಡು ಅರಿವು ಕಾರ್ಯಕ್ರಮವನ್ನು ಯಶಸ್ವಿಯಾಗಿ ಶಾಲೆಯಲ್ಲಿ ನಡೆಯಿತು.
The school has celebrated Gandhi Jayanti
ಸ್ವಚ್ಛ ಕೊಡಗು ಸುಂದರ ಕೊಡಗು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ ಮೂರ್ನಾಡ್ ಬಸ್ ನಿಲ್ದಾಣದಿಂದ ಕುಂಬಳದಾಳು ಕೊಡವ ಸಮಾಜ ಮಾರ್ಗವಾಗಿ ಸ್ವಚ್ಛತಾ ಕಾರ್ಯಕ್ರಮ ಏರ್ಪಡಿಸಲಾಯಿತು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಸ್ಕೌಟ್ ಶಿಕ್ಷಕಿ ಶ್ರೀಮತಿ ಸುನಿತಾ ಎಂ , ಗೈ ಡ್ ಶಿಕ್ಷಕಿ ಶ್ರೀಮತಿ ಸ್ವರ್ಣಲತಾ ಹಾಗೂ ಹಿಮಾಲಯ ವುಡ್ ಬ್ಯಾಡ್ಜ್ ಹೋಲ್ಡರ್ ಸ್ಕೌಟ್ ಮಾಸ್ಟರ್ ಶ್ರೀಮಾನ್ ಗುಲ್ಶನ್ ರವರು ಭಾಗವಹಿಸಿದರು. ಮೂರ್ನಾಡಿನ ಗ್ರಾಮ ಪಂಚಾಯತ್ ರವರು ಈ ಕಾರ್ಯಕ್ರಮಕ್ಕೆ ಕೈಜೋಡಿಸಿದರು. ಸ್ವಚ್ಛ ಕೊಡಗು ಸುಂದರ ಕೊಡಗು ಕಾರ್ಯಕ್ರಮವು ಶಿಸ್ತು ಬದ್ಧವಾಗಿ ನೆರವೇರಿತು.
ದಿನಾಂಕ 23/10/2025 ರಂದು ಶ್ರೀಮತಿ ಅನಿತಾ, ಕೌನ್ಸಿಲರ್, ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಮಡಿಕೇರಿ ಇವರಿಂದ 7,8,9 ಹಾಗೂ 10ನೇ ತರಗತಿಯ ಹೆಣ್ಣು ಮಕ್ಕಳಿಗೆ ಹದಿಹರೆಯದ ಆರೋಗ್ಯ ಶಿಕ್ಷಣ ದ ಬಗ್ಗೆ ಮಾಹಿತಿ ನೀಡಲಾಯಿತು.
ವಿದ್ಯಾರ್ಥಿಗಳಿಗೆ ಹದಿಹರೆಯದಲ್ಲಾಗುವ ಬದಲಾವಣೆಗಳು, ಜೀವನ ಕೌಶಲ್ಯ, ಗುರಿ ಮುಟ್ಟುವಿಕೆ ಇವುಗಳ ಬಗ್ಗೆ ಅರಿವು ನೀಡಲಾಯಿತು

















































































































































































































